ಉತ್ತರ ಕರ್ನಾಟಕದ ಹೆಬ್ಬಾಗಿಲು ಯಾಲಕ್ಕಿ ಕಂಪಿನ ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರ. ಸನ್ ೧೯೬೬ ರ ಕಾಲಘಟ್ಟದಲ್ಲಿ ಔದ್ಯೋಗಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಂಸ್ಕೃತಿ ಮತ್ತು ಆಚಾರ ವಿಚಾರದಲ್ಲಿ ಮುಂಚೂಣಿಯಲ್ಲಿ ಇದ್ದಂತಹ ಹಾವೇರಿಯಲ್ಲಿ ಯಾಲಕ್ಕಿ ವ್ಯಾಪಾರಕ್ಕೂ ಪ್ರಸಿದ್ಧಿಯಲ್ಲಿತ್ತು. ಈಗಲೂ ಯಾಲಕ್ಕಿ ಕಂಪಿನ ನಗರ ಎಂಬ ಖ್ಯಾತಿಯನ್ನು ಗಳಿಸಿ ತನ್ನ ಛಾಪನ್ನು ಉಳಿಸಿಕೊಂಡಿದೆ. ಅಂದಿನ ಸ್ವಾಭಿಮಾನಿ ಯಾಲಕ್ಕಿ ವ್ಯಾಪಾರಸ್ಥರು, ಪ್ರಮುಖ ಉದ್ಯಮಿಗಳು, ಗಣ್ಯ ವ್ಯಾಪಾರಿಗಳ ತಮ್ಮದೇ ಆದ ಒಂದು ಸಹಕಾರಿ ಬ್ಯಾಂಕನ್ನು ಶ್ರೀ ಷಡಾಕ್ಷರಪ್ಪ ಸಿದ್ರಾಮಪ್ಪ ಮುಷ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಸಿ ಅದೇ ವರ್ಷ ೨೪-೦೨-೧೯೬೬ ರಂದು ಹುಕ್ಕೇರಿಮಠದ ಕಟ್ಟಡದಲ್ಲಿ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಉದ್ಘಾಟನೆಗೊಂಡಿತು.