ಉತ್ತರ ಕರ್ನಾಟಕದ ಹೆಬ್ಬಾಗಿಲು ಯಾಲಕ್ಕಿ ಕಂಪಿನ ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರ. ಸನ್ ೧೯೬೬ ರ ಕಾಲಘಟ್ಟದಲ್ಲಿ ಔದ್ಯೋಗಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಂಸ್ಕೃತಿ ಮತ್ತು ಆಚಾರ ವಿಚಾರದಲ್ಲಿ ಮುಂಚೂಣಿಯಲ್ಲಿ ಇದ್ದಂತಹ ಹಾವೇರಿಯಲ್ಲಿ ಯಾಲಕ್ಕಿ ವ್ಯಾಪಾರಕ್ಕೂ ಪ್ರಸಿದ್ಧಿಯಲ್ಲಿತ್ತು. ಈಗಲೂ ಯಾಲಕ್ಕಿ ಕಂಪಿನ ನಗರ ಎಂಬ ಖ್ಯಾತಿಯನ್ನು ಗಳಿಸಿ ತನ್ನ ಛಾಪನ್ನು ಉಳಿಸಿಕೊಂಡಿದೆ. ಅಂದಿನ ಸ್ವಾಭಿಮಾನಿ ಯಾಲಕ್ಕಿ ವ್ಯಾಪಾರಸ್ಥರು, ಪ್ರಮುಖ ಉದ್ಯಮಿಗಳು, ಗಣ್ಯ ವ್ಯಾಪಾರಿಗಳ ತಮ್ಮದೇ ಆದ ಒಂದು ಸಹಕಾರಿ ಬ್ಯಾಂಕನ್ನು ಶ್ರೀ ಷಡಾಕ್ಷರಪ್ಪ ಸಿದ್ರಾಮಪ್ಪ ಮುಷ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಸಿ ಅದೇ ವರ್ಷ ೨೪-೦೨-೧೯೬೬ ರಂದು ಹುಕ್ಕೇರಿಮಠದ ಕಟ್ಟಡದಲ್ಲಿ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಉದ್ಘಾಟನೆಗೊಂಡಿತು.
ಈ ಎಲ್ಲ ಸ್ನೇಹಿತರ ದೂರ ದೃಷ್ಟಿ ಕಾರ್ಯತತ್ಪರತೆಯಿಂದ ಈ ಬ್ಯಾಂಕಿನ ಉದಯಕ್ಕೆ ಸಾಕ್ಷಿಯಾಯಿತು. ಇವರೆಲ್ಲರ ಶ್ರಮದಿಂದಾಗಿ ಈ ಬ್ಯಾಂಕು ಇಂದು ಉಚ್ಚಾಯ ಸ್ಥಿತಿಗೆ ಬರಲು ಕಾರಣವಾಯಿತು.
೩೦-೦೬-೧೯೬೬ | ೩೧-೦೩-೨೦೨೫ | |
---|---|---|
ಶೇರುದಾರರು | ೩೦ (ಸಾವಿರಗಳಲ್ಲಿ) | ೩೨೫೫(ಲಕ್ಷಗಳಲ್ಲಿ) |
ಶೇರು ಬಂಡವಾಳ | ೫೩,೦೦೦.೦೦ | ೧೨೯.೨೫ |
ರಿಜರ್ವ ವ ಇತರೆ ಫಂಡುಗಳು | ೯೬.೦೦ | ೧೬೩೩.೭೨ |
ಠೇವಣಿಗಳು | ೫೧,೭೪೬.೦೦ | ೪,೮೮೨.೬೮ |
ಒಟ್ಟು ಸಾಲ ಕೊಟ್ಟಿದ್ದು | ೭೭,೧೨೫.೦೦ | ೪,೨೨೯.೮೧ |
ದುಡಿಯುವ ಬಂಡವಾಳ | ೧,೦೭,೧೯೦.೦೦ | ೬,೭೧೨.೮೬ |
ನಿವ್ವಳ ಲಾಭ | - | ೧೧೨.೦೦ |
ಆಡಿಟ್ ಕ್ಲಾಸ್ | ಬಿ | ಎ |
ನಂತರ ನಡೆದ ಸನ್ ೧೯೬೫-೬೬ ನೇ ಸಾಲಿನ ಅವಧಿಗೆ ಸನ್ ೧೯೬೫-೬೬ ನೇ ಸಾಲಿನ ಶ್ರೀ ಲಿಂಗರಾಜ ಚನಬಸಪ್ಪ ಬಾಲೇಹೊಸೂರ ಇವರು ಪ್ರಥಮ ಹಾಗೂ ಸ್ಥಾಪಕ ಚೇರಮನ್ನರಾಗಿ ಹಾಗೂ ಶ್ರೀ ಷಡಾಕ್ಷರಪ್ಪ ಸಿದ್ರಾಮಪ್ಪ ಮುಷ್ಠಿ ಇವರು ಪ್ರಥಮ ಹಾಗೂ ಸ್ಥಾಪಕ ವ್ಹಾಯಿಸ್ ಚೇರಮನ್ರು ಅಂತಾ ಆಯ್ಕೆಯಾದರು.
ಅದ್ಭುತವಾದ ಕಾರ್ಯತತ್ಪರತೆ ಹೊಂದಿದ ಆಡಳಿತ ಮಂಡಳಿ, ಬ್ಯಾಂಕಿಗೆ ವೇಗವಾಗಿ ಚಾಲನೆ ನೀಡಲು ಬ್ಯಾಂಕಿಗೆ ಒಬ್ಬ ನುರಿತ ಹಾಗೂ ಅನುಭವಿಕ ಮ್ಯಾನೇಜರರನ್ನು ನೇಮಕಾತಿ ಮಾಡಲು ತೀರ್ಮಾನಿಸಿದರು. ಅದರಂತೆ ಶ್ರೀ ಎಂ.ಬಿ. ಕೋರಿಶೆಟ್ಟರ ಇವರನ್ನು ಮ್ಯಾನೇಜರ ಅಂತಾ ನೇಮಕ ಮಾಡಿದರು. ಸದರಿಯವರು ಅಪಾರ ಅನುಭವ ಹೊಂದಿದ್ದರಿAದ ಬ್ಯಾಂಕಿನ ಬೆಳವಣಿಗೆಯಲ್ಲಿ ಇವರ ಪಾಲು ಬಹುಮುಖ್ಯವಾಗಿ ಕಂಡುಬರುತ್ತದೆ.
೧೯೬೬ ರಲ್ಲಿಯೇ ಬ್ಯಾಂಕಿನ ಪ್ರಾರಂಭದಲ್ಲಿಯೇ ಬ್ಯಾಂಕಿನ ಬೆಳವಣಿಗೆಗೆ ಅವಶ್ಯವಿರುವ ಎಲ್ಲ ತರಹದ ನಿಯಮಗಳನ್ನು ಅಳವಡಿಸಿಕೊಂಡು ಬೇರೆ ಬೇರೆ ಊರುಗಳಲ್ಲಿ ಬ್ಯಾಂಕಿನ ಖಾತೆಗಳನ್ನು ತೆರೆದು ಗ್ರಾಹಕರ ವ್ಯವಹಾರಗಳಿಗೆ ಅನುಕೂಲ ಕಲ್ಪಿಸಿದ್ದರು.
ಇದೊಂದು ಅಂದಿನ ಆಡಳಿತ ಮಂಡಳಿಯ ವ್ಯವಹಾರಿಕ ಜಾಣ್ಮೆಗೆ ಸಾಕ್ಷಿಯಾಗುತ್ತದೆ. ೧೯೬೬ ರಲ್ಲಿ ದಿ ಕಾರ್ಡಮಮ ಬ್ಯಾಂಕ ಬಾಂಬೆಗೆ ಡಿ.ಡಿ. ಕೊಡುತ್ತಿತ್ತು ಅನ್ನುವುದು ಅಂದಿನ ಗ್ರಾಹಕರಿಗೆ ಆಶ್ಚರ್ಯದ ಸಂಗತಿಯಾಗಿತ್ತು. ಸನ್ ೧೯೬೬ ರಲ್ಲಿಯೇ ಎಲ್ಲ ತರಹದ ಬ್ಯಾಂಕಿನ ನಿಯಮಾವಳಿಗಳನ್ನು ಮಾಡಿಕೊಂಡದ್ದಲ್ಲದೇ ಹಲವು ಬಗೆಯ ಸಾಲಗಳನ್ನು ನೀಡಲಾಗುತ್ತಿತ್ತು.
ದಿ: ೦೧-೦೭-೧೯೬೬ ರಲ್ಲಿ ಬ್ಯಾಂಕು ನೀಡುತ್ತಿದ್ದ ಸಾಲಗಳು.
ಈ ರೀತಿಯ ಬ್ಯಾಂಕಿನ ಬೆಳವಣಿಗೆಯೊಂದಿಗೆ ದಿ:೧೩-೧೧-೧೯೮೬ ರಲ್ಲಿ ಮಾನ್ಯ ರಿಜರ್ವ ಬ್ಯಾಂಕಿನಿAದ ಬ್ಯಾಂಕಿAಗ್ ಲೈಸೆನ್ಸ್ ಪಡೆದು ಹೆಗ್ಗಳಿಕೆಗೆ ಪಾತ್ರವಾಯಿತು.
ಈ ರೀತಿಯಾಗಿ ವ್ಯವಹಾರಗಳನ್ನು ಬೆಳೆಸುತ್ತಾ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಬ್ಯಾಂಕು ತನ್ನ ಸ್ವಂತ ಜಾಗೆಯನ್ನು ಹೊಂದಲು ನಿರ್ಣಯಿಸಿತು. ಎ.ಪಿ.ಎಂ.ಸಿ ವ್ಯವಹಾರಸ್ಥರಿಗೆ ಅನುಕೂಲವಾಗಲೆಂದು ಎ.ಪಿ.ಎಂ.ಸಿ.ಗೆ ಹತ್ತಿರವಾಗುವಂತೆ ರೇಲ್ವೆ ಸ್ಟೇಷನ್ ಸಮೀಪ ಜಾಗೆಯನ್ನು ಗುರುತಿಸಿ ಖರೀದಿಸಲು ನಿರ್ಣಯಿಸಿತು. ಅದರಂತೆ ೧೯೮೬ ನೇ ಇಸ್ವಿಯಲ್ಲಿ ಜಾಗೆಯನ್ನು ಖರೀದಿಸಿತು.
ಬ್ಯಾಂಕು ತನ್ನ ಸ್ವಂತ ಸುಸಜ್ಜಿತವಾದ ಕಟ್ಟಡವನ್ನು ಹೊಂದಲು ನಿರ್ಣಯಿಸಿ ದಿನಾಂಕ:೧೧-೦೮-೧೯೮೬ ರ ಸೋಮವಾರ ಪರಮಪೂಜ್ಯರಾದ ಶ್ರೀ ಶಿವಲಿಂಗಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಅಡಿಗಲ್ಲು ಸಮಾರಂಭ ನೆರವೇರಿತು. ಆಡಳಿತ ಮಂಡಳಿಯ ಅಂದಿನ ಚೇರಮನ್ನರ ಮತ್ತು ನಿರ್ದೇಶಕ ಮಂಡಳಿಯವರ ಪ್ರತಿಫಲವಾಗಿ ಭವ್ಯವಾದ ಸ್ವಂತ ಕಟ್ಟಡವನ್ನು ಪೂರ್ಣಗೊಳಿಸಿ ದಿನಾಂಕ:೨೫-೦೧-೧೯೮೮ ರಂದು ಪರಮಪೂಜ್ಯರಾದ ಶ್ರೀ ಮ.ನಿ.ಪ್ರ. ಶಿವಲಿಂಗಮಹಾಸ್ವಾಮಿಗಳವರಿAದ ಉದ್ಘಾಟನೆಗೊಂಡಿತು.
ಸದಸ್ಯರು ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕು ಹಾವೇರಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಬ್ಯಾಂಕು ಅಂತಾ ಗುರುತಿಸಿಕೊಂಡಿದೆ. ಬ್ಯಾಂಕು ತನ್ನ ೨೫ ವರ್ಷಗಳ ರಜತ ಮಹೋತ್ಸವದ ಆಚರಣೆಯನ್ನು ಅಂದಿನ ಚೇರಮನ್ನರಾದ ಶ್ರೀ ವ್ಹಿ. ಬಿ. ಕುರುಬಗೊಂಡಶೆಟ್ಟರ ಅವರ ನೇತೃತ್ವದಲ್ಲಿ ದಿನಾಂಕ:೦೬-೦೧-೧೯೯೭ ರಂದು ಬ್ಯಾಂಕಿನ ರಜತ ಮಹೋತ್ಸವವನ್ನು ಬ್ಯಾಂಕಿನ ಮೊದಲ ಮಹಡಿ ಕಟ್ಟಡದ ಉದ್ಘಾಟನೆಯೊಂದಿಗೆ “ಸಿಲ್ವರ್ ಜ್ಯುಬಿಲಿ ಹಾಲ್” ಅಂತಾ ನಾಮಕರಣ ಮಾಡಿ ಪರಮಪೂಜ್ಯರಾದ ಶ್ರೀ ಮ.ನಿ.ಪ್ರ. ಶಿವಲಿಂಗಮಹಾಸ್ವಾಮಿಗಳವರ ಅಮೃತಹಸ್ತದಿಂದ ನೆರವೇರಲ್ಪಟ್ಟಿತು.
ಬ್ಯಾಂಕು ೧೯೬೬ ರಿಂದ ಇಂದಿನವರೆಗೂ ಸತತವಾಗಿ ಲಾಭದಲ್ಲಿಯೇ ನಡೆಯುತ್ತಿದ್ದು ಪ್ರಗತಿ ಪಥದತ್ತ ಸಾಗುತ್ತಾ ನಡೆದಿದೆ. ಇದಕ್ಕೆ ಸಾಕ್ಷಿಯಾಗಿ ಬ್ಯಾಂಕು ಸನ್ ೨೦೧೮-೨೦೧೯ ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಬ್ಯಾಂಕು ಅಂತಾ ಪ್ರಶಸ್ತಿಗಳನ್ನು ಪಡೆದು ಕೀರ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುತ್ತದೆ. ಇದಲ್ಲದೇ ಬ್ಯಾಂಕು ಸತತವಾಗಿ ಆಡಿಟ್ “ಎ” ವರ್ಗದಲ್ಲಿಯೇ ಮುಂದುವರೆದಿದೆ. ಬ್ಯಾಂಕು ಕ್ರಮಿಸಿದ ಈ ಸುದೀರ್ಘ ಅವಧಿಯಲ್ಲಿ ಅನೇಕ ಎಡರು ತೊಡರುಗಳು ಬಂದರೂ, ಅವೆಲ್ಲವುಗಳ ಮಧ್ಯ ಬ್ಯಾಂಕಿನ ಹಿಂದಿನ ಇಂದಿನ ಎಲ್ಲ ಚೇರಮನ್ರು ಹಾಗೂ ನಿರ್ದೇಶಕರುಗಳ ನಿಸ್ವಾರ್ಥ ಆಡಳಿತದ ಜೊತೆಗೆ ದಕ್ಷ ಸಿಬ್ಬಂದಿಯ ಅವಿರತ ಪ್ರಯತ್ನ ಹಾಗೂ ಸೌಹಾರ್ದಯುತ ಸೇವೆಗಳೇ ಬ್ಯಾಂಕಿನ ಆಧಾರ ಸ್ತಂಬಗಳು. ಬ್ಯಾಂಕು ಯಾವುದೇ ರಾಷ್ಟಿçÃಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಗ್ರಾಹಕರ ಹಿತದೃಷ್ಟಿಯಿಂದ ಸರ್ವರೀತಿಯ ಸವಲತ್ತುಗಳನ್ನು ಒದಗಿಸುತ್ತಾ ಬಂದಿರುತ್ತದೆ.
ಸನ್ ೨೦೨೦-೨೫ ರ ಅವಧಿಯಲ್ಲಿ ಬ್ಯಾಂಕು ಗಳಿಸಿರುವ ಲಾಭ.(ರೂ.ಲಕ್ಷಗಳಲ್ಲಿ)
ಬ್ಯಾಂಕಿನ ನವೀಕೃತ ಕಟ್ಟಡದ ಉದ್ಘಾಟನೆಯು ಪರಮಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಗವಿಶಿದ್ದೇಶ್ವರ ಮಹಾಸ್ವಾಮಿಗಳವರು ಗವಿಮಠ, ಕೊಪ್ಪಳ ಹಾಗೂ ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳವರು ಹುಕ್ಕೇರಿಮಠ, ಹಾವೇರಿ ಅವರ ಅಮೃತ ಹಸ್ತದಿಂದ ದಿನಾಂಕ:೦೮-೦೯-೨೦೨೪ ರಂದು ನೆರವೇರಿತು. ಬ್ಯಾಂಕು ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು ಕಂಡಿದೆ. ಅವುಗಳಲ್ಲಿ ಕಂಪ್ಯೂಟರೀಕರಣ, ಮೊಬೈಲ್ SMS, RTGS, NEFT, Host to Host ವ್ಯವಸ್ಥೆ ಈಗಾಗಲೇ ಇದ್ದು, ದಿನಾಂಕ:೦೮-೦೯-೨೦೨೪ ರಂದು ATM ಕಾರ್ಡುಗಳ ಸೌಲಭ್ಯ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳವರಿಂದ ಹಾಗೂ ಮೊಬೈಲ್ ಬ್ಯಾಂಕಿAಗ್ ಉದ್ಘಾಟನೆಯು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಂಡಿರುತ್ತದೆ.
ಬ್ಯಾಂಕಿನ ನವೀಕೃತ ಕಟ್ಟಡದ ಉದ್ಘಾಟನೆಯು ಪರಮಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಗವಿಶಿದ್ದೇಶ್ವರ ಮಹಾಸ್ವಾಮಿಗಳವರು ಗವಿಮಠ, ಕೊಪ್ಪಳ ಹಾಗೂ ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳವರು ಹುಕ್ಕೇರಿಮಠ, ಹಾವೇರಿ ಅವರ ಅಮೃತ ಹಸ್ತದಿಂದ ದಿನಾಂಕ:೦೮-೦೯-೨೦೨೪ ರಂದು ನೆರವೇರಿತು. ಬ್ಯಾಂಕು ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು ಕಂಡಿದೆ. ಅವುಗಳಲ್ಲಿ ಕಂಪ್ಯೂಟರೀಕರಣ, ಮೊಬೈಲ್ SMS, RTGS, NEFT, Host to Host ವ್ಯವಸ್ಥೆ ಈಗಾಗಲೇ ಇದ್ದು, ದಿನಾಂಕ:೦೮-೦೯-೨೦೨೪ ರಂದು ATM ಕಾರ್ಡುಗಳ ಸೌಲಭ್ಯ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳವರಿಂದ ಹಾಗೂ ಮೊಬೈಲ್ ಬ್ಯಾಂಕಿAಗ್ ಉದ್ಘಾಟನೆಯು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಂಡಿರುತ್ತದೆ.
1. ಎಸ್ ಎಂ ಎಸ್ ಬ್ಯಾಂಕಿಂಗ್ |
2. NEFT/RTGSಸೌಲಭ್ಯ |
3. ಕೋರ್ ಬ್ಯಾಂಕಿಂಗ್ |
4. ಸಿ ಟಿ ಎಸ್ ಕ್ಲಿಯರಿಂಗ್ |
5. ಲಾಕರ್ ಸೇವೆ |
6. ಮೊಬೈಲ್ ಬ್ಯಾಂಕಿಂಗ್ |
7. ಎಟಿಎಂ |